ಸಬ್ಕಾ ಸಾಥ್, ದೇಸಿ ಗೋ ಕಾ ವಿಕಾಸ್, ದೇಸಿ ಗೋ ಕೊ ಮಾನವ್ ಪರ್ ವಿಶ್ವಾಸ್, ಸ್ವಸ್ಥ್ ದುನಿಯಾ ಕ ಪ್ರಯಾಸ್...!
ಎಲ್ಲರೂ ಜೊತೆಗೂಡಿ, ದೇಸಿ ಗೋವುಗಳ ಸೇವೆಮಾಡುವ ಸಂಕಲ್ಪ, ನಾವು ಮಾಡುವ ನಿಸ್ವಾರ್ಥ ಸೇವೆಯಿಂದ ಗೋ ಮಾತೆಯ ಆಶೀರ್ವಾದ ಮತ್ತು ವಿಶ್ವಾಸ ಮರಳಿ ಪಡೆಯುವುದು, ಮನುಕುಲಕ್ಕೆ ಮತ್ತು ಒಟ್ಟಾರೆಯಾಗಿ ಎಲ್ಲಾ ಜೀವಿಗಳಿಗೆ. ಆರೋಗ್ಯಕರ ಜೀವನ ಆರೋಗ್ಯಕರ ಜಗತ್ತನ್ನು ಸೃಷ್ಟಿಸುವತ್ತ ಪ್ರಯತ್ನ.
ಲೇಖನ ಗೋಶಾಲೆ ಬೆಂಗಳೂರಿನ ಯಲಹಂಕದಲ್ಲಿರುವ ಒಂದು ಲಾಭರಹಿತ ಸಂಸ್ಥೆ. 2019 ರಲ್ಲಿ ರಾಜೇಶ್ ರಾವ್ ಮತ್ತು ರಮೇಶ್ ರವರು ದೇಸಿ ಹಸುಗಳ ಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ಲೇಖನ ಗೋಶಾಲೆಯನ್ನು ಪ್ರಾರಂಭಿಸಲಾಯಿತು
ನಮ್ಮ ಮಿಷನ್
ಇಂದಿನ ಮತ್ತು ಮುಂದಿನ ಪೀಳಿಗೆಗಳ ಆರೋಗ್ಯಕರ ಬದುಕಿನ ಸಂರಕ್ಷಣೆಗೆ ದೇಸಿ ಹಸುಗಳ ಸೇವೆ ಮಾಡುವುದರ ಜೊತೆಗೆ ದೇಸಿ ಹಸುಗಳ ಸೇವೆ ಮಾಡಲು ಹೆಚ್ಚು ಜನರಿಗೆ ಪ್ರೇರೇಪಿಸಿ ಪ್ರೋತ್ಸಾಹಿಸುವುದು
ನಮ್ಮ ವಿಷನ್
" ಪ್ರಸ್ತುತ ಅಸ್ತಿತ್ವದಲ್ಲಿರುವ ಹಾಲು, ಹಾಲಿನ ಉತ್ಪನ್ನಗಳು. ರಾಸಾಯನಿಕ ಗೊಬ್ಬರ ಮತ್ತು ರಾಸಾಯನಿಕ ಪೂಜಾ ಉತ್ಪನ್ನಗಳನ್ನು ಬದಲಿಸಿ ಪ್ರತಿಯೊಬ್ಬರು ನೈಸರ್ಗಿಕ ದೇಸಿ ಹಸುವಿನ ಹಾಲು, ಹಾಲಿನ ಉತ್ಪನ್ನಗಳು. ಗೊಬ್ಬರ ಮತ್ತು ಪೂಜಾ ಉತ್ಪನ್ನಗಳನ್ನು ಬಳಸುವಂತೆ ಮಾಡಿ ಭೂಮಿ ಮತ್ತು ಮನುಷ್ಯನ ಅಸ್ತಿತ್ವವನ್ನು ಉಳಿಸುವುದು